ನೂರಾರು ಕೋಟಿ ಅನುದಾನದಿಂದ ಕ್ಷೇತ್ರ ಸಮಗ್ರ ಅಭಿವೃದ್ಧಿ ಮಾಡುವೆ: ಶಾಸಕ ಪಿ.ಎಂ.ನರೇಂದ್ರಸ್ವಾಮಿಮಳವಳ್ಳಿ ತಾಲೂಕಿನ ನಾಗೇಗೌಡನದೊಡ್ಡಿ, ತಂಮ್ಮಡಹಳ್ಳಿ, ಮೊಳೇದೊಡ್ಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 8.5 ಕೋಟಿ ರು. ವೆಚ್ಚದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಲಾಗಿದೆ. ನೀರಾವರಿ ಇಲಾಖೆಯಿಂದ 170 ಕೋಟಿ, 184 ಕೋಟಿ ಕುಡಿಯುವ ನೀರಿನ ಯೊಜನೆ, 25 ಕೋಟಿ ವಿಶೇಷ ಅನುದಾನ, ಎಸ್ಸಿಪಿ ಟಿಎಸ್ಪಿ 6 ಕೋಟಿ, ಪುರಸಭೆ ವ್ಯಾಪ್ತಿಯಲ್ಲಿ 15 ಕೋಟಿಗೂ ಹೆಚ್ಚು ಅನುದಾನ ತಂದಿದ್ದು, ಕಾಮಗಾರಿ ಆರಂಭಿಗೊಂಡಿದೆ.