ಪತ್ರಕರ್ತರೇ ಸತ್ಯದ ಕಡೆಗೆ ಬೆಳಕು ಚೆಲ್ಲಿ: ಶಾಸಕ ಪಿ.ಎಂ.ನರೇಂದ್ರಸ್ವಾಮಿಪ್ರಸ್ತುತ ಸುದ್ದಿಗಳಲ್ಲಿ ಸತ್ಯ-ಸುಳ್ಳುಗಳ ಬಗ್ಗೆ ಪರಮರ್ಶೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಸಂವಿಧಾನದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸತ್ಯ ಸಂಶೋಧನೆ ಕಡೆಗೆ ಮುಖ ಮಾಡಬೇಕು. ಪತ್ರಕರ್ತರು ವಸ್ತು ನಿಷ್ಠೆ ಜೊತೆಗೆ ಶೈಕ್ಷಣಿಕ, ಸಾಮಾಜಿಕ ಹಾಗೂ ವಿಷಯಧಾರಿತವಾಗಿ ತನಿಖಾ ವರದಿಗಳ ಬಗ್ಗೆ ಗಮನ ನೀಡಬೇಕು.