ಮಂತ್ರಿಗಳು, ಶಾಸಕರೆಲ್ಲರೂ ಕನ್ನಡ ದ್ರೋಹಿಗಳು: ವಾಟಾಳ್ ನಾಗರಾಜ್ನಮ್ಮ ರಾಜ್ಯದಲ್ಲಿರುವ ಮಂತ್ರಿಗಳು, ಶಾಸಕರೇ ನಿಜವಾದ ಕನ್ನಡ ದ್ರೋಹಿಗಳು. ಕನ್ನಡ ನಾಡು- ನುಡಿಯ ಬಗ್ಗೆ ದನಿ ಎತ್ತಿ ಮಾತನಾಡುವ ಎದೆಗಾರಿಕೆ ಪ್ರದರ್ಶಿಸದ ಇಂತಹವರಿಂದ ಕನ್ನಡ, ಕನ್ನಡಿಗರ ಉದ್ಧಾರ ಎಂದಿಗೂ ಸಾಧ್ಯವಿಲ್ಲ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.