ಸಹಕಾರ ಸಂಘಗಳ ಮತದಾರರ ಪಟ್ಟಿ ತಯಾರಿ ಮಾಡುವುದೇ ದೊಡ್ಡ ಸವಾಲು: ಎಚ್.ಆರ್.ನಾಗಭೂಷಣ್ಸಹಕಾರ ಸಂಘಗಳ ಕಾಯ್ದೆ, ಬೈಲಾಗಳು ಪದೇಪದೆ ತಿದ್ದುಪಡಿಯಾಗುತ್ತಿವೆ. ಹಾಗಾಗಿ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಕಾರ್ಯನಿರ್ವಾಹಣಾಧಿಕಾರಿಗಳು ಸಹಕಾರ ಇಲಾಖೆ ಕಾಯ್ದೆಗಳು, ಕಾನೂನು ಹಾಗೂ ಬೈಲಗಳ ಬಗ್ಗೆ ಅರಿವು ಮೂಡಿಸಿಕೊಂಡು ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಕಾಯ್ದೆ, ಕಾನೂನು, ಬೈಲಗಳು ಉಲ್ಲಂಘನೆ ಮಾಡಬಾರದು.