ಜೋರು ಮಳೆಗೆ ಮಂಡ್ಯ ನಗರದ ಎಲ್ಲಾ ರಸ್ತೆಗಳು ಜಲಾವೃತಮಳೆ ಬಂತೆಂದರೆ ಮಹಾವೀರ ವೃತ್ತ ಸಂಪೂರ್ಣವಾಗಿ ಜಲಾವೃತವಾಗುವುದು ಸರ್ವೇಸಾಮಾನ್ಯವಾಗಿದೆ. ಇಲ್ಲಿನ ಚರಂಡಿ ವ್ಯವಸ್ಥ ಸುಸ್ಥಿತಿಯಲ್ಲಿಲ್ಲ. ಕಿರಿದಾದ ಚರಂಡಿಯಲ್ಲಿ ನೀರು ನಿಧಾನವಾಗಿ ಹರಿದುಹೋಗುವುದರಿಂದ ಮೇಲಿನಿಂದ ಹರಿದುಬರುವ ನೀರು ಇಲ್ಲಿ ಸಂಗ್ರಹವಾಗಿ ನಿಲ್ಲುತ್ತದೆ. ಇದರಿಂದ ವಾಹನಸವಾರರು, ಪಾದಚಾರಿಗಳು, ವ್ಯಾಪಾರಸ್ಥರು, ವರ್ತಕರು ದಶಕದಿಂದಲೂ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಯಾರೊಬ್ಬರೂ ಸಮಸ್ಯೆಗೆ ಮುಕ್ತಿ ದೊರಕಿಸುವ ಪ್ರಯತ್ನವನ್ನೇ ನಡೆಸುತ್ತಿಲ್ಲ.