ಸಾಮಾಜಿಕ ಬದ್ಧತೆಗೆ ಪುನೀತ್ ಸ್ಫೂರ್ತಿ: ಎಲ್.ಸಂದೇಶ್ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಪ್ರತಿಮೆಯನ್ನು ಮಂಡ್ಯ ನಗರದ ಡಾ.ರಾಜ್‌ಕುಮಾರ್ ಪ್ರತಿಮೆ ಬಳಿ ಸ್ಥಾಪಿಸುವುದರ ಮೂಲಕ ಹೊಸ ತಲೆಮಾರಿನ ಯುವಜನಾಂಗದಲ್ಲಿ ಸಾಮಾಜಿಕ ಬದ್ಧತೆ ಮೂಡಿಸಬೇಕು. ಕರವೇ, ವಿವಿಧ ಸಂಘಟನೆಗಳು ಮತ್ತು ಪುನೀತ್ ರಾಜ್‌ಕುಮಾರ್ ಅಭಿಮಾನಿ ಬಳಗದ ಬೆಂಬಲದ ನಡುವೆ ಪುನೀತ್ ರಾಜ್‌ಕುಮಾರ್ ಪ್ರತಿಮೆಯನ್ನು ಸ್ಥಾಪಿಸುವ ಉದ್ದೇಶವಿದ್ದು, ಶೀಘ್ರದಲ್ಲೇ ಪ್ರಕ್ರಿಯೆ ಆರಂಭಿಸಲಾಗುವುದು.