ಕ್ಷೀಣಿಸುತ್ತಿರುವ ದುಡಿಮೆ, ಮರೆಯಾಗಿರುವ ಶ್ರಮ: ಚಿತ್ರನಟ ದರ್ಶನ್ಸಮಾಜದಲ್ಲಿ ದುಡಿದಿದ್ದೆಲ್ಲವೂ ನನಗೇ ಇರಲಿ ಎಂಬ ಸ್ವಾರ್ಥ ಮನೋಭಾವ ಹೆಚ್ಚಾಗಿದೆ. ಚುನಾವಣೆ ಸಮಯದಲ್ಲಿ ಇಂತಹ ಕಾರ್ಯಕ್ರಮಗಳು ನಡೆದರೆ ಅದಕ್ಕೆ ಬೇರೆ ಅರ್ಥ ಇರುತ್ತದೆ. ಆದರೆ, ಚುನಾವಣೆ ನಂತರವೂ ಸಮಾಜ ಸೇವೆ ಮುಂದುವರೆಸಿರುವ ಉದಯ್ ಚಾರಿಟಬಲ್ ಟ್ರಸ್ಟ್‌ನ ಸೇವೆ ಶ್ಲಾಘನೀಯ. ಕದಲೂರು ಉದಯ್ ಅವರು ಮಾತು ಕಡಿಮೆಯಾದರೂ ಸಮಾಜ ಒಪ್ಪುವ ಕಾಯಕದಲ್ಲಿ ಸಾಗುತ್ತಿದ್ದು, ಮತ್ತಷ್ಟು ಒಳಿತಾಗಲಿ.