ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆಲೋಕಪಯೋಗಿ ಇಲಾಖೆಯಿಂದ ಮುಂಜೂರಾಗಿದ್ದ 6.50 ಕೋಟಿ ರು. ವೆಚ್ಚದ ಕಾಮಗಾರಿಗೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಗುದ್ದಲಿ ಪೂಜೆ. ಕಾಮಗಾರಿ ಅತಿ ಶೀಘ್ರದಲ್ಲೇ ಪ್ರಾರಂಭವಾಗಿ ಒಂದು ವರ್ಷದೊಳಗೆ ಕಟ್ಟಡ ಪೂರ್ಣವಾಗಿ ಉದ್ಘಾಟನೆಗೆ ಸಜ್ಜಾಗುತ್ತದೆ ಎಂದು ಭರವಸೆ. ಹಾಗೇ, ಸಾಗ್ಯ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆ ಅಡಿಯ ಅನುದಾನದಲ್ಲಿ ಬಿಡುಗಡೆಯಾಗಿದ್ದ 84 ಲಕ್ಷ ರು. ವೆಚ್ಚದ ಬೋರ್ ವೆಲ್ ಹಾಗೂ ಓವರ್ ಟ್ಯಾಂಕ್ ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ.