ಕನ್ನಡ ಭಾಷೆಗೆ ಸಾವಿಲ್ಲ ಎಂಬುದನ್ನು ತೋರಿಸಿಕೊಟ್ಟ ಕೆ.ಎಸ್. ನರಸಿಂಹಸ್ವಾಮಿ: ಎನ್ .ಚಲುವರಾಯಸ್ವಾಮಿಕವಿಯ ಮನಸ್ಸು ಮಲ್ಲಿಗೆಯಂತಿದ್ದು, ನಾಡಿನ ಪರಿವರ್ತನೆಗೆ ನಾಂದಿಯಾಗಿರಬೇಕು ಎನ್ನುವುದರಲ್ಲಿ ಮೊದಲಿಗರಾದ್ದ ಮೈಸೂರ ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಅವರು ಸುಗಮ ಸಂಗೀತಕ್ಕೆಗಟ್ಟಿಯಾದ ನೆಲೆಯನ್ನು ಕಟ್ಟಿಕೊಟ್ಟರು. ಕನ್ನಡತನ, ಭಾಷೆಗೆ ಮಬ್ಬುಕವಿಯುವಂತಹ ಸ್ಥಿತಿಯಲ್ಲಿ ಕಾವ್ಯದ ಮೂಲಕ ಅಸ್ಮಿತೆ ಕಾಪಾಡಿದ ಶ್ರೇಷ್ಟಕವಿಗಳಲ್ಲಿ ಇವರು ಒಬ್ಬರು. ಪಾಶ್ಚಾತ್ಯ ಗೀತೆ, ಗಾಯನದ ಅಬ್ಬರದಲ್ಲಿ ಯುವಕರು ಕೊಚ್ಚಿ ಹೋಗುವಂತಹ ಕಾಲಘಟ್ಟದಲ್ಲಿ ಸುಗಮ ಸಂಗೀತದ ಮೂಲಕ ಕವಿಗಳ ಕಾವ್ಯ ಉಸಿರಾಡುವಂತಾಗಿ ಕನ್ನಡ ಭಾಷೆಗೆ ಸಾವಿಲ್ಲ ಎಂದು ತೋರಿಸಿದರು