ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು ವಿರೋಧಿಸಿ ಬಿಜೆಪಿ ಮೌನ ಪ್ರತಿಭಟನೆಸಿದ್ದರಾಮಯ್ಯ ಮುಡಾದಲ್ಲಿ ಮಾಡಿರುವ ಕೆಲಸಕ್ಕೆ ಮುಡಾ ಇರುವವರೆಗೂ ಸ್ಥಿರ ಸ್ಥಾಯಿಯಾಗಿರುತ್ತಾರೆ. ಹೀಗಾಗಿ, ಅವರ ಹೆಸರನ್ನು ಬೇರೆ ಎಲ್ಲೂ ಇಡುವ ಅವಶ್ಯಕತೆ ಇಲ್ಲ. ಮೈಸೂರಿನಲ್ಲಿ ನಿಮ್ಮ ಹೆಸರಿನ ವೃತ್ತ ಇದೆ. ಹಾಸ್ಟೆಲ್ ಒಂದಕ್ಕೆ ನಿಮ್ಮ ಹೆಸರನ್ನು ಇರಿಸಲಾಗಿದೆ. ಈ ವಿಚಾರವಾಗಿ ನಮಗೆ ಮುಖ್ಯಮಂತ್ರಿ ಮನೆ ಬಾಗಿಲು ತಟ್ಟುವ ಅಗತ್ಯವಿಲ್ಲ. ಸಿದ್ದರಾಮಯ್ಯ ಕಾನೂನು ಪದವೀಧರರು, ಅವರಿಗೆ ಕಾನೂನಿನ ಅರಿವು ಇರಬೇಕು.