ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಚಂಚನಕಟ್ಟೆ ಜಲಪಾತೋತ್ಸವವಿದ್ಯುತ್ ದೀಪಗಳ ಬೆಳಕಿನಲ್ಲಿ ಜಗಮಗಿಸಿದ ಜಲಪಾತ, ಬಣ್ಣ ಬಣ್ಣದ ಚಿತ್ತಾರದಲ್ಲಿ ಹಾಲ್ನೊರೆಯಂತೆ ದುಮ್ಮಿಕ್ಕಿದ ಕಾವೇರಿ ಜಲಧಾರೆ, ಜಲಪಾತದ ವೈಭವ ಕಂಡು ಆನಂದ ತುಂದಿಲರಾದ ನೋಡುಗರು, ಕಣ್ಮನ ಸೆಳೆದ ದೀಪಾಲಂಕಾರ, ಸಂಗೀತದ ರಸದೌತಣ ಉಣಬಡಿಸಿದ ಕಲಾವಿದರು, ಕಣ್ಣಿಗೆ ಹಬ್ಬವನ್ನುಂಟು ಮಾಡಿದ ಜಲಪಾತೋತ್ಸವ.