ರೈತರನ್ನು ಅತ್ಯಂತ ಗೌರವದಿಂದ ಕಾಣಬೇಕು: ಸತೀಶ್ ಸಲಹೆಜಗತ್ತಿನಲ್ಲಿ ರೈತಾಪಿ ವರ್ಗವೇ ಅತ್ಯಂತ ಶ್ರೇಷ್ಠ. ಅವರಿಂದಲೇ ಜಗತ್ತಿನ ಹಸಿವು ನೀಗುತ್ತಿದೆ. ರೈತರು ಉತ್ತು ಬಿತ್ತು ಬೆಳೆದು ಆಹಾರೋತ್ಪನ್ನ ಕೊಡದಿದ್ದರೆ, ನಾವು ಯಾರೂ ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ರೈತರನ್ನು ಅತ್ಯಂತ ಗೌರವದಿಂದ ಕಾಣಬೇಕು. ಅವರ ಪರವಾದ ಕಾಳಜಿಯನ್ನು ನಿರಂತರವಾಗಿ ವ್ಯಕ್ತಪಡಿಸಬೇಕು.