ಹೆಬ್ಬಾಳು ಕೊಪ್ಪಲು ಗ್ರಾಮದಲ್ಲಿ ಬಸವೇಶ್ವರ, ಓಕುಳಿ ಹಬ್ಬ ವಿಜೃಂಭಣೆಯಿಂದ ಆಚರಣೆಗ್ರಾಮದ ಸಮೀಪವೇ ಹರಿಯುವ ಕಾವೇರಿ ನಾಲೆಯಿಂದ ಗ್ರಾಮದ ಮಹಿಳೆಯರು, ಹೆಣ್ಣುಮಕ್ಕಳು ವಿವಿಧ ಕಲಾ ತಂಡದೊಂದಿಗೆ ತೆರಳಿ ಕಳಸಗಳನ್ನು ತರಲಾಯಿತು. ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ಗ್ರಾಮಸ್ಥರು ಕಳಸಗಳನ್ನು ವೀಕ್ಷಿಸಿದರು. ನಂತರ ದೇವಾಲಯದ ಮುಂದಿರುವ ಓಕಳಿಗೆ ಕಳಶಗಳನ್ನು ತಂದು ಅದರಲ್ಲಿ ನೀರನ್ನು ಹಾಕಲಾಯಿತು