ರಾವಂದೂರು ಹೋಬಳಿಯಾದ್ಯಂತ ಉತ್ತಮ ಮಳೆ; ಕೃಷಿ ಚಟುವಟಿಕೆಗಳಿಗೆ ಮುಂದಾದ ರೈತರುರಾವಂದೂರು, ದೊಡ್ಡ ಬೇಲಾಳು, ಕಂಪಲಾಪುರ, ಹಿಟ್ನೆ ಹೆಬ್ಬಾಗಿಲು, ರಾಮನಾಥತುಂಗ ಸೇರಿದಂತೆ ಆನೇಕ ಗ್ರಾಮಗಳಲ್ಲಿ ಸತತವಾಗಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆಯಿಂದ ತಂಬಾಕು ರೈತನು ಸಂತಸ ವ್ಯಕ್ತಪಡಿಸುತ್ತಾ ಮುಂಗಾರಿನ ಸಿಂಚನದೊಂದಿಗೆ ತಂಬಾಕು ನಾಟಿ ಚುರುಕು ಮಾಡಿದ್ದಾನೆ. ಆದರೆ ತಾಲೂಕಿನ ವಿವಿಧಡೆ ಅತಿ ಹೆಚ್ಚು ಮಳೆಯಾಗಿದ್ದು, ನಾಟಿ ಮಾಡಿದ ಹೊಗೆ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿ, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.