ಅಧಿಕಾರಿಗಳ ವ್ಯಕ್ತಿತ್ವ ವಿಕಸನಕ್ಕೆ ತರಬೇತಿ ಮುಖ್ಯ: ಯೋಗೀಶ್ಅಧಿಕಾರಿಗಳು ಮೊದಲು ಸರ್ಕಾರದ ಸುತ್ತೋಲೆಗಳನ್ನು ತಿಳಿದುಕೊಳ್ಳಬೇಕು. ನಂತರ ಹಾಡಿಗಳಿಗೆ ತೆರಳಿ ಅವರಿಗೆ ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮನೆ, ವಿದ್ಯುತ್ ಇದಿಯಾ, ಓದುತ್ತಿರುವ ಮಕ್ಕಳೆಷ್ಟು, ಶಾಲೆ ಬಿಟ್ಟ ಮಕ್ಕಳೆಷ್ಟು, ಆಶ್ರಯ ಶಾಲೆಗಳಲ್ಲಿ ಸಾಕ್ಷರತೆಯ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಂಡು, ಆ ಸಮುದಾಯದ ಜನರಿಗೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.