ಪೇಯ್ನ್ ಕಿಲ್ಲರ್ ಇಂಜಕ್ಷನ್ ಪಡೆದು ಪರೀಕ್ಷೆ ಬರೆದಿದ್ದ ಎಸ್. ಧನುಷ್ ರಾಜ್ಯಕ್ಕೆ ಪ್ರಥಮ ಸ್ನೇಹಿತರ ಜೊತೆ ಚಾಲೆಂಜ್ ಮಾಡಿಕೊಂಡು ಪರೀಕ್ಷೆ ಬರೆದೆ. ಎಸ್ಸೆಸ್ಸೆಲ್ಸಿಗೆ ಬಂದಾಗಲಿಂದಲೂ ಒಂದು ಯೋಜನೆ ಹಾಕಿಕೊಂಡು ಓದಿಕೊಂಡು ಬಂದೆ. ಮನೆಯಲ್ಲಿ, ಕೋಚಿಂಗ್ ಸೆಂಟರ್ ನಲ್ಲೂ ಒಳ್ಳೆಯ ಉತ್ತೇಜನ ಸಿಕ್ಕಿತು. ಈಗ ತುಂಬಾ ಖುಷಿ ಆಗುತ್ತಿದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದಿ, ನೀಟ್ ಬರೆದು ಎಂಬಿಬಿಎಸ್ ಮಾಡುವ ಆಸೆ ಇದೆ.