ಸಂಕ್ರಾಂತಿ ಹಬ್ಬದ ವ್ಯಾಪಾರ ಬಲು ಜೋರು...!ಸುಗ್ಗಿಯ ಸಂಕೇತವಾಗಿ ಹೊಸದಾಗಿ ಬೆಳೆದ ಕಬ್ಬು, ಎಲಚಿ ಹಣ್ಣಿನ ಜೊತೆಗೆ ಎಳ್ಳು, ಬೆಲ್ಲ ನೀಡುವುದು ಸಂಪ್ರದಾಯ. ಅದರಂತೆ ಮೈಸೂರಿನ ಪ್ರಮುಖ ಮಾರುಕಟ್ಟೆಯಾದ ದೇವರಾಜ ಮಾರುಕಟ್ಟೆ, ಅಗ್ರಹಾರದ ಚಿಕ್ಕಮಾರುಕಟ್ಟೆ, ಮಂಡಿ ಮೊಹಲ್ಲಾ ಮಾರುಕಟ್ಟೆ, ಧನ್ವಂತರಿ ರಸ್ತೆ, ಅಗ್ರಹಾರ ವೃತ್ತ, ಎಂ.ಜಿ. ರಸ್ತೆ ಸೇರಿದಂತೆ ಅನೇಕ ಕಡೆಗಳಲ್ಲಿ ಕಬ್ಬು, ಸೇವಂತಿಗೆ ಮುಂತಾದ ವಸ್ತುಗಳ ಮಾರಾಟ ಜೋರಾಗಿತ್ತು.