ಮಹಿಳೆಯರ ಪೈಕಿ ಗೆದ್ದಿರುವುದು ಚಂದ್ರಪ್ರಭಾ ಅರಸು ಮಾತ್ರಚಂದ್ರಪ್ರಭಾ ಅರಸು 1983 ರಲ್ಲಿ ಜನತಾಪಕ್ಷದಿಂದ ವಿಧಾನಸಭೆಗೆ ಪ್ರಥಮ ಬಾರಿಗೆ ಗೆದ್ದು, ರಾಮಕೃಷ್ಣ ಹೆಗಡೆ ಅವರ ಸಂಪುಟದಲ್ಲಿ ರೇಷ್ಮೆ ಖಾತೆಯ ಸಚಿವೆಯಾಗಿದ್ದರು. ಕೆಲವೇ ದಿನಗಳಲ್ಲಿ ಅಜೀಜ್ ಸೇಠ್ ಅವರೊಂದಿಗೆ ಕಾಂಗ್ರೆಸ್ ಸೇರಿದರು. 1985 ರಲ್ಲಿ ಅವರು ಹುಣಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತರು. 1989 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.