ವಿಸಿ ನಾಲೆಗೆ ಸೇರುತ್ತಿರುವ ಪಟ್ಟಣದ ಬಡಾವಣೆಗಳ ಕೊಳಚೆ ನೀರು...!ಪಾಂಡವಪುರ ಪಟ್ಟಣದ ಮಹಾಂಕಾಳೇಶ್ವರಿ ಬಡಾವಣೆ ಸೇರಿದಂತೆ ಐದಾರು ಕಡೆ ಚರಂಡಿಯ ಕೊಳಚೆ ನೀರು ವಿಶ್ವೇಶ್ವರಯ್ಯ ನಾಲೆಗೆ ಬಂದು ಸೇರುತ್ತಿದೆ. ಇದರಿಂದಾಗಿ ನಾಲೆ ನೀರು ಕಲುಷಿತಗೊಂಡು ವಿಷಯುಕ್ತವಾಗುತ್ತಿದೆ. ನಾಲೆ ಕೆಳಭಾಗದ ಜನರು-ಜಾನುವಾರುಗಳು ಇದೇ ನೀರನ್ನು ಕುಡಿಯುವುದಕ್ಕೆ ಬಳಕೆ ಮಾಡುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಜತೆಗೆ ಇದೀಗ ವಿಸಿ ನಾಲೆ ಆಧುನೀಕರಣ ನಡೆಯುತ್ತಿದ್ದು, ಇದಕ್ಕೆ ತೊಂದರೆಯಾಗಲಿದೆ.