ಜಿಲ್ಲಾ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕೆ.ಎಸ್.ಶಶಿಜಿಲ್ಲಾ ಒಲಂಪಿಕ್ ಅಸೋಸಿಯೇಷನ್‌ಗೆ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಕೆ.ಎಸ್.ಶಶಿ ಆಯ್ಕೆಯಾಗಿದ್ದಾರೆ. ಏಪ್ರಿಲ್ 5ರಿಂದ 20ರವರೆಗೆ ಶಿವಮೊಗ್ಗದ ಕ್ರೀಡಾಪಟುಗಳಿಗೆ 25ರಿಂದ 30 ಕ್ರೀಡೆಗಳ ಉಚಿತ ತರಬೇತಿ ಶಿಬಿರ ಮತ್ತು ಪ್ರಾತ್ಯಕ್ಷತೆಯನ್ನು ನೆಹರೂ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ನುರಿತ ತರಬೇತುದಾರರು, ಅಂತರ ರಾಷ್ಟ್ರೀಯ ಆಟಗಾರರು ತರಬೇತಿ ಶಿಬಿರವನ್ನು ನಡೆಸಿಕೊಡಲಿದ್ದಾರೆ ಎಂದು ಶಿವಮೊಗ್ಗದಲ್ಲಿ ತಿಳಿಸಲಾಗಿದೆ.