ಅಗಿಲೆ ಬಳಿ ನಾಯಿಗಳ ದಾಳಿಗೆ ಹಸು ಬಲಿಅಗಿಲೆ ಬಳಿ, ಜಕ್ಕೆನಹಳ್ಳಿ ಕೊಪ್ಪಲು ಹತ್ತಿರ ನಗರಸಭೆಯ ಎಲ್ಲಾ ಕಸವನ್ನು ಸುರಿಯುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿ ಇಲ್ಲಿನ ಸುತ್ತಮುತ್ತಲ ಇರುವ ಹಸುಗಳು, ಕರುಗಳು, ಕುರಿ, ಕೋಳಿಗಳನ್ನು ತಿಂದು ಹಾಕುತ್ತಿವೆ. ಕಸ ಸುರಿಯುವ ಜಾಗದ ಸುತ್ತ ೪೦೦ಕ್ಕೂ ಹೆಚ್ಚು ನಾಯಿಗಳಿದ್ದು, ಜನರು ಓಡಾಡಲು ಹೆದರುವಂತಾಗಿದೆ.