ದತ್ತಜಯಂತಿ<bha>;</bha> ಸಂಕೀರ್ತನಾ ಯಾತ್ರೆಗೆ ಶಾಂತಿಯುತ ತೆರೆ ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಬೆಳಿಗ್ಗೆ ಯಾತ್ರೆಗೆ ಚಾಲನೆ ನೀಡಿದರು. ಮಾಜಿ ಸಚಿವ ಸಿ.ಟಿ. ರವಿ ಸೇರಿದಂತೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಬಿಜೆಪಿ ಮುಖಂಡರು, ಮಹಿಳೆಯರು ಯಾತ್ರೆಯಲ್ಲಿ ಹೊರಟರು. ಸಂಕೀರ್ತನಾ ಯಾತ್ರೆ ಕೆ.ಎಂ. ರಸ್ತೆ, ರತ್ನಗಿರಿ ರಸ್ತೆ ಮೂಲಕ ಶ್ರೀ ಕಾಮಧೇನು ಗಣಪತಿ ದೇವಾಲಯದ ಬಳಿ ತೆರಳಿ ಬಳಿಕ ಮಹಿಳೆಯರು ವಾಹನ ಗಳಲ್ಲಿ ದತ್ತಪೀಠಕ್ಕೆ ತೆರಳಿದರು.