ಹನುಮಮಾಲಾ ವಿಸರ್ಜನೆ- ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದ ಡಿಸಿ ನಳಿನ್ ಅತುಲ್ರಾಜ್ಯ ಹಾಗೂ ದೇಶದ ನಾನಾ ಭಾಗಗಳಿಂದ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ಅಂಜನಾದ್ರಿಯ ಬೆಟ್ಟದ ಸುತ್ತಲು, ಹನುಮನಹಳ್ಳಿ, ಆನೆಗೊಂದಿ, ಕಡೆಬಾಗಿಲು ಸೇರಿದಂತೆ ವಿವಿಧೆಡೆ ಗುರುತಿಸಿರುವ ಪಾರ್ಕಿಂಗ್ ಸ್ಥಳಗಳು ಮತ್ತು ವಾಹನ ಸವಾರರಿಗೆ ಅನುಕೂಲವಾಗುವಂತೆ ಸೂಚನಾ ಫಲಕಗಳನ್ನು ಹಾಕಿರುವುದನ್ನು ವೀಕ್ಷಿಸಿದರು.