ಕನ್ನಂಬಾಡಿಯಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆಪೂರ್ವಿಕರನ್ನು ಹೆಚ್ಚಾಗಿ ಕಾಡುತ್ತಿದ್ದ ಪ್ಲೇಗು, ಕಾಲರಾ, ಮಲೇರಿಯಾ, ದಡಾರ ಸೇರಿದಂತೆ ಯಾವುದೇ ಕಾಯಿಲೆಗಳು ಬಾರದಿರಲಿ, ಮಳೆ ಬೆಳೆ ಚೆನ್ನಾಗಿ ಆಗಲಿ, ಎಲ್ಲಾ ಜನಾಂಗಗಳ ಜನತೆಯ ನಡುವೆ ಬಾಂಧವ್ಯ ಇರಲಿ ಎನ್ನುವ ದೃಷ್ಟಿಯಿಂದ ಶ್ರೀ ಕನ್ನಂಬಾಡಿಯಮ್ಮ ದೇವಿಯ ಹಬ್ಬ ಆಚರಿಸುತ್ತಿದ್ದರು. ಕೆಲವು ಕಾರಣಗಳಿಂದ ಈ ಹಬ್ಬ ನಿಂತು ಹೋಗಿತ್ತು. ಶ್ರೀ ಕನ್ನಂಬಾಡಿಯಮ್ಮದೇವಿಯೇ ಪ್ರೇರಣೆ ನೀಡಿ, ಮತ್ತೆ ಹಬ್ಬ ಆಚರಿಸಲು ಜನರು ಮುಂದಾದ ಕಾರಣದಿಂದ ೨೦೨೨ರ ನವೆಂಬರ್ ೧೯ರಂದು ಪುನಃ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.