ಕೊರಗರು, ಜೇನುಕುರುಬರಿಗೆ ಪ್ರತ್ಯೇಕ ಒಳಮೀಸಲು ಅಗತ್ಯ: ಪಾಂಗಾಳ ಬಾಬು ಕೊರಗಕೊರಗರು, ಜೇನು ಕುರುಬರಿಗೆ ಪ್ರತ್ಯೇಕ ಒಳಮೀಸಲು ವಿಚಾರದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಹಾಗೂ ಸಮಾಜಿಕ ಬದ್ಧತೆ ಇರುವ ಜನಸಾಮಾನ್ಯರು, ಸಾರ್ವಜನಿಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಹಿರಿಯ ಸಾಹಿತಿ, ಕೊರಗ ಸಮುದಾಯದ ಹೋರಾಟಗಾರ ಪಾಂಗಾಳ ಬಾಬು ಕೊರಗ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.