ಚಿರತೆ ಸೆರೆಗೆ ಬೋನು, ಸಿಸಿ ಕ್ಯಾಮೆರಾ ಅಳವಡಿಕೆಜಮಖಂಡಿ ತಾಲೂಕಿನ ಚಿಕ್ಕಜಂಬಗಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಚಿರತೆಯ ಸೆರೆಗೆ ಕಸರತ್ತು ನಡೆಸಿದ್ದಾರೆ. ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಓಡಾಟ ನಡೆಸಿದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಅದರಂತೆ ಬೋನ್‌ಗಳನ್ನು ಇರಿಸಲಾಗಿದ್ದು, ಚಿರತೆ ಸೆರೆ ಹಿಡಿಯಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಡಿಎಫ್‌ಓ ಮಹೇಶ ಗುಡಿ ತಿಳಿಸಿದ್ದಾರೆ.