ಗ್ರಾಹಕನ ಆಸ್ತಿ ಹರಾಜಿಗೆ ಬ್ಯಾಂಕ್ ಸಂಚು: ಡಿಎಸ್ಎಸ್ಸಾಲದ ಕಂತುಗಳನ್ನು ಕಟ್ಟಿದ್ದರೂ ಸಾಲ ಪಡೆದ ವ್ಯಕ್ತಿ ಗಣೇಶ್ ಎಂಬವರ ಆಸ್ತಿ ಹರಾಜು ಹಾಕುವ ಸಲುವಾಗಿ ಏಕಪಕ್ಷೀಯ ನಿರ್ಧಾರ ಕೈಗೊಂಡ ಬ್ಯಾಂಕ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಕೈಗೊಂಡು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮೇಲಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಘವೇಂದ್ರ ಡಿ. ಕಡೇಮನಿ ಒತ್ತಾಯಿಸಿದ್ದಾರೆ.