ಡೋಣಿ ನದಿ ಅವಾಂತರ, ರೈತರು ತತ್ತರಕನ್ನಡಪ್ರಭ ವಾರ್ತೆ ತಾಳಿಕೋಟೆತಾಲೂಕಿನ ಬೊಮ್ಮನಹಳ್ಳಿ, ಗುತ್ತಿಹಾಳ, ಬೋಳವಾಡ, ತಾಳಿಕೋಟೆ, ಹರನಾಳ, ಮಿಣಜಗಿ ಗ್ರಾಮಗಳ ಸೀಮೆಯಲ್ಲಿ ವರುಣದೇವ ಅವಾಂತರ ಸೃಷ್ಟಿ ಮಾಡಿದ್ದಾನೆ. ಡೋಣಿ ನದಿ ಪ್ರವಾಹದ ನೀರು ನುಗ್ಗಿದ್ದು ಬಿತ್ತನೆ ಮಾಡಿದ್ದ ಬೀಜಗೊಬ್ಬರ ಸೇರಿದಂತೆ ಕೆಲವೆಡೆ ಬೆಳೆದಿದ್ದ ಬೆಳೆಯೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈ ಮೂಲಕ ಡೋಣಿ ನದಿ ರೈತರಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ.