ಕಾರ್ಲ್ ಮಾರ್ಕ್ಸ್ ನಗರ ಪರಿಶೀಲನೆಗೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿದಾವಣಗೆರೆಯಲ್ಲಿ ಶಾಂತಿ, ಸಾಮರಸ್ಯಕ್ಕೆ ಧಕ್ಕೆ ತರುವವರು ಯಾವುದೇ ಜಾತಿ, ಧರ್ಮೀಯರಾಗಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಸಾಮರಸ್ಯ ಕದಡುವವರ ಬಗ್ಗೆ ಜನರೂ ಜಾಗೃತರಾಗಿರಬೇಕು. ಗಲಭೆಯಿಂದ ನಲುಗಿದ ಕಾರ್ಲ್ ಮಾರ್ಕ್ಸ್ ನಗರಕ್ಕೆ ಕಾಂಗ್ರೆಸ್ ಪಕ್ಷದ ಸತ್ಯಶೋಧನಾ ಸಮಿತಿ ಮಾಡಿಕೊಂಡು, ನಾವು ಹೋಗಿ ಪರಿಶೀಲಿಸುತ್ತೇವೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೇಳಿದ್ದಾರೆ.