ಜಿಲ್ಲಾಡಳಿತ ಭವನದಲ್ಲಿ ಕಾಯಕ ಶರಣರ ಜಯಂತಿ ಆಚರಣೆ11 ಮತ್ತು 12 ನೇ ಶತಮಾನವನ್ನು ವಚನ ಚಳುವಳಿಯ ಕಾಲವೆಂದೇ ಕರೆಯುತ್ತಾರೆ. ಈ ಕಾಲಘಟ್ಟದಲ್ಲಿ 200 ಕ್ಕೂ ಹೆಚ್ಚು ವಚನಕಾರರು ಇದ್ದರು. ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಇವರು ಬಸವಣ್ಣರ ಹಾದಿಯಲ್ಲಿ ನಡೆದು ಬಂದ ಶರಣರು. ಸಾವು ಅನ್ನುವಂತದ್ದು ದೇಹಕ್ಕೆ ಮಾತ್ರ ನಮ್ಮ ಆತ್ಮಕ್ಕೆ ಎಂದಿಗೂ ಸಾವಿಲ್ಲ ಎಂದು ತಮ್ಮ ವಚನಗಳ ಮೂಲಕ ಜನರಿಗೆ ತಿಳಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದರು.