ಸರ್ಕಾರಗಳು ರೈತನಿಗೆ ತೊಂದರೆ ಆಗದಂತೆ ತೆರಿಗೆ ವಿಧಿಸಲಿರಾಮನಗರ: ಬ್ರಿಟೀಷರ ಆಳ್ವಿಕೆಯ ಕಾಲದಿಂದ ಹಿಡಿದು ರಾಜ ಮಹಾರಾಜರ ಆದಿಯಾಗಿ ಆಳುವ ಸರ್ಕಾರಗಳು ಮುಂದುವರಿಸಿಕೊಂಡು ಬಂದಿರುವ ತೆರಿಗೆ ವ್ಯವಸ್ಥೆ ಹಾಗೂ ಪೂರಕವಾದ ಕಾರ್ಯಕ್ರಮಗಳನ್ನು ಜಾರಿ ಮಾಡದಿರುವುದೇ ಕೃಷಿ ಕ್ಷೇತ್ರ ಕ್ಷೀಣಿಸಿ, ರೈತರು ಸಂಕಷ್ಟದಲ್ಲಿ ಸಿಲುಕಲು ಕಾರಣವಾಗಿದೆ ಎಂದು ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಬೇಸರ ವ್ಯಕ್ತಪಡಿಸಿದರು.