ಪವರ್ ಬಿಲ್ ಮೊತ್ತ 236 ಕೋಟಿ ರು. ಪಾವತಿರಾಮನಗರ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಜ್ಯೋತಿ ಯೋಜನೆ ಅಡಿ ಜಿಲ್ಲೆಯಲ್ಲಿ 3.26 ಲಕ್ಷ ಕುಟುಂಬಗಳು ಉಚಿತ ವಿದ್ಯುತ್ ಬಳಕೆ ಮಾಡಿದ್ದು, ಇದರ ಮೊತ್ತ 236 ಕೋಟಿ ರುಪಾಯಿಗಳಾಗಿದೆ. 2023ರ ಆಗಸ್ಟ್‌ನಿಂದ 2025ರ ಏಪ್ರಿಲ್‌ವರೆಗೆ ಅಂದರೆ 21 ತಿಂಗಳ ಅವಧಿಯಲ್ಲಿ 3,26,063 ಬಡ ಕುಟುಂಬಗಳು ವಿದ್ಯುತ್ ಬಿಲ್‌ನ ಹೊರೆಯಿಂದ ಮುಕ್ತಿ ಹೊಂದಿವೆ.