ಅಧ್ಯಯನ ಹೆಸರಿನಲ್ಲಿ ಕುದೂರು ಗ್ರಾಪಂನಲ್ಲಿ ದುಂದು ವೆಚ್ಚಕುದೂರು: ಅಪರಾಧ ಪ್ರಕರಣ ತಡೆಯಲು ಮತ್ತು ಎಲ್ಲೆಂದರಲ್ಲಿ ಕಸ ಎಸೆದು ಗ್ರಾಮದ ಅಂದ ಕೆಡಿಸುವ ವ್ಯಕ್ತಿಗಳಿಗೆ ಎಚ್ಚರಿಕೆ ನೀಡುವ ಸಲುವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಪಡಿಸಲು ಹಣ ಇಲ್ಲ. ಆದರೆ, ಅಧ್ಯಯನದ ಹೆಸರಿನಲ್ಲಿ ಸಾವಿರಾರು ರುಪಾಯಿ ದುಂದು ವೆಚ್ಚ ಮಾಡಲು ಕುದೂರು ಗ್ರಾಪಂ ಸದಸ್ಯರು ಮುಂದಾಗಿದ್ದಾರೆ.