ನಿಯಮ ಪಾಲಿಸಿದ ಬೆಸ್ಕಾಂ ಎಇಇ ಲಕ್ಷ್ಮೀಕಾಂತ್ ವರ್ಗಾವಣೆ ಮಾಡಿ ಕಟ್ಟಡಗಳಿಗೆ ೫೦೦ ಚದರ ಅಡಿ ಇದ್ದರೆ ಯಾವುದೇ ಓಸಿ, ಸಿಸಿ ಇಲ್ಲದೆ ವಿದ್ಯುತ್ ಸಂಪರ್ಕ ಕೊಡಬಹುದೆಂದು ಸರ್ಕಾರದ ನಿರ್ದೇಶನವಿದ್ದರೂ ಸಹ ದೇವನಹಳ್ಳಿ ಎಇಇ ಲಕ್ಷ್ಮೀಕಾಂತ್ ಪಾಲನೆ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಹಾಗೂ ಗುತ್ತಿಗೆದಾರಿಗೆ ತೊಂದರೆಯಾಗುತ್ತಿದ್ದು ಅವರನ್ನು ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ಎಸ್ಸಿ ಮತ್ತು ಎಸ್ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಡಿ.ಸುಧಾಕರ್ ತಿಳಿಸಿದ್ದಾರೆ