ಕಸ ಕೆರೆಗೆ ಸುರಿಯದಂತೆ ಗ್ರಾಪಂ ವಿಶೇಷ ಆಂದೋಲನಹೋಬಳಿಯ ವೆಂಕಟಗಿರಿಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಹೋಟೆಲ್, ಬೇಕರಿ, ವೈದ್ಯಕೀಯ ಮೆಡಿಕಲ್ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡದೆ ಕೆರೆಗೆ ಸುರಿಯುತ್ತಿದ್ದ ಕಿಡಿಗೇಡಿಗಳ ವಿರುದ್ಧ ಗ್ರಾಪಂ ವಿಶೇಷ ಆಂದೋಲನ ಕೈಗೊಂಡಿದ್ದು, ಕೆರೆಯ ಇಕ್ಕೆಲಗಳಲ್ಲಿ ಸ್ಥಳೀಯ ಮೆಡಿಕಲ್ ಕ್ಲಿನಿಕ್ಗಳು, ಹೋಟೆಲ್, ಬೇಕರಿಗಳು ಸುರಿದಿದ್ದ ಕಸ ತುಂಬಿಕೊಂಡು ಬಂದ ಗ್ರಾಪಂ ಸಿಬ್ಬಂದಿ, ಅವರವರ ಕಸ ಅವರ ಅಂಗಡಿ, ಮುಂಗಟ್ಟುಗಳ ಮುಂದೆಯೇ ಸುರಿದು ಎಚ್ಚರಿಕೆ ನೀಡಿದರು.