ಧ್ಯಾನ, ಯೋಗಗಳಿಂದ ದೇಹ-ಮನಸ್ಸು ಸದೃಢಕನಕಪುರ: ವಿದ್ಯಾರ್ಥಿಗಳು ಬೆಳಗಿನ ಉಪಹಾರ ಸೇವಿಸದೆ ತರಗತಿಗೆ ಬಂದರೆ ಮನಸ್ಸು ಚಂಚಲವಾಗಿ ಏನನ್ನೂ ಗ್ರಹಿಸಲಾಗದ ಸ್ಥಿತಿಗೆ ತಲುಪುತ್ತೀರಿ, ಇತ್ತೀಚಿನ ದಿನಗಳಲ್ಲಿ ತರಾತುರಿ ಅಥವಾ ಅಶಿಸ್ತಿನ ಜೀವನ ಸಣ್ಣ ಮಕ್ಕಳು ಮತ್ತು ಯುವಕರ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಯ ರಾಜ್ಯ ಆಧ್ಯಾತ್ಮ ಸಂಚಾಲಕ ಸುಂದರ್ ಅನಂತ ರಾಮನ್ ವಿಷಾದಿಸಿದರು.