ಅಲ್ಲಿಂದ ಬಂದು, ಇಲ್ಲಿಂದ ಹೋಗಿ ಗೆದ್ದು ಸೋತವರುರಾಮನಗರ: ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಕನಕಪುರ ಮತ್ತು ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಥಳೀಯರಿಗಿಂತ ಹೊರಗಿನಿಂದ ಬಂದ ಹೆಚ್ಚಿನ ರಾಜಕಾರಣಿಗಳು ಗೆಲುವು ಸಾಧಿಸಿದ್ದಾರೆ.ಈವರೆಗೆ ಕನಕಪುರ ಮತ್ತು ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಿಂದ 8 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ 5 ಮಂದಿ ಹೊರಗಿನವರಾದರೆ, 3 ಮಂದಿ ಮಾತ್ರ ಸ್ಥಳೀಯರಾಗಿದ್ದಾರೆ.