ಹಾರೋಹಳ್ಳಿ ಕೈಗಾರಿಕಾ ಪ್ರದೇಶ ಅವ್ಯವಸ್ಥೆಗಳ ಆಗರಕೆಲವು ಕಾರ್ಖಾನೆಗಳಲ್ಲಿ ಉಪಯೋಗಕ್ಕೆ ಬಾರದೇ ಇರುವ ಪ್ಲಾಸ್ಟಿಕ್ ಕಾಗದಗಳನ್ನು ಹಾಗೂ ತಮ್ಮಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳನ್ನು ಅಕ್ಕಪಕ್ಕದ ಖಾಲಿ ಜಾಗಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.ಇದರಿಂದ ಸ್ಥಳೀಯ ಪರಿಸರ ಸ್ವಚ್ಛತೆ ಹಾಳಾಗಿ ಕಲುಷಿತವಾಗುವುದಲ್ಲದೆ, ಸೊಳ್ಳೆ, ವಿಷ ಜಂತುಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.