ಹಸಿರು ನಕ್ಷತ್ರ ಪ್ರೊ.ನಂಜುಂಡಸ್ವಾಮಿ ರೈತ ಹೋರಾಟಕ್ಕೆ ಸ್ಫೂರ್ತಿ: ನಲ್ಲಹಳ್ಳಿ ಶ್ರೀನಿವಾಸ್ ರೈತ ಕುಲದ ಉದ್ಧಾರಕ್ಕೆ ಎಂ.ಡಿ. ನಂಜುಂಡಸ್ವಾಮಿಯವರ ಕೊಡುಗೆ ಅಪಾರವಾದದ್ದು, ಎಂ.ಡಿ. ನಂಜುಂಡಸ್ವಾಮಿಯವರು ವಿಧಾನಸಭಾ ಸದಸ್ಯರಾಗಿದ್ದರೂ ಸಹ ಆಡಂಬರದ ಜೀವನಕ್ಕೆ ಮಾರುಹೋಗದೆ ರೈತ ಸಮುದಾಯದ ಹಿತೈಷಿಯಾಗಿದ್ದರು. ದಿಟ್ಟ ಮಾತು, ಗಾಂಭೀರ್ಯದ ನಡೆಯಿಂದ ಎಂ. ಡಿ. ನಂಜುಂಡಸ್ವಾಮಿಯವರು ಒಂದು ರೈತ ಸಂಘಟನೆಯನ್ನು ಕಟ್ಟದಿದ್ದರೆ ಇಂದು ರೈತರ ಬದುಕು ಶೋಚನೀಯ ಸ್ಥಿತಿಯಲ್ಲಿ ಇರಬೇಕಾಗಿತ್ತು .