ತಾವರೆಕೊಪ್ಪದಲ್ಲಿ ಕಣ್ಮನ ಸೆಳೆದ ಹೋರಿ ಹಬ್ಬಪೈಲ್ವಾನರಾ... ಹಿಡಿರಿ ಹೋರಿ, ಹರಿ ಕೊಬ್ಬರಿ, ಹೊಡಿರಿ ಕೇಕೆ.. ಇದು ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬದ ಧಮಾಕಾ. ಗ್ರಾಮದಲ್ಲಿ ಹೋರಿ ಹಬ್ಬ ಆಚರಣಾ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬ ಅಕ್ಷರಶಃ ರೋಚಕತೆ ಸೃಷ್ಠಿಸಿತ್ತು. ನೆರೆದವರ ಕೇಕೆ, ಹಲಗೆ ಸದ್ದಿಗೆ ಹೋರಿಗಳ ಹೂಂಕರಿಸುವಿಕೆ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.