ಪ್ರತಿಭಾ ಕಾರಂಜಿಗೆ ಪ್ರೋತ್ಸಾಹ ಸಿಗುವುದು ಮುಖ್ಯಶಾಲಾ ಮಕ್ಕಳ ಪ್ರತಿಭಾ ಕಾರಂಜಿಗೆ, ಗ್ರಾಮಸ್ಥರ ಪ್ರೋತ್ಸಾಹ, ಸಹಕಾರ ದೊಡ್ಡ ಮಟ್ಟದಲ್ಲಿ ದೊರೆತ್ತಿದ್ದು, ಕರ್ನಾಟಕ ರಾಜೋತ್ಸವ ಹಬ್ಬದ ಸಂಭ್ರಮದಂತೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳು, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಶಿಕ್ಷಕರು ಲವಲವಿಕೆಯಿಂದ ಭಾಗವಹಿಸುತ್ತಿರುವುದು ಹೆಮ್ಮೆ ಎನ್ನಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಪಾಟೀಲ್ ಶ್ಲಾಘಿಸಿದರು.