ಮತದಾನಕ್ಕೆ ಸಿಂಗಾರಗೊಂಡ ಮತಗಟ್ಟೆ ಕೇಂದ್ರಗಳುನಗರದ ಎಚ್ ಎಸ್ ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜು ಮೈದಾನ ಸೇರಿ ಎಲ್ಲ ಮಸ್ಟರಿಂಗ್ ಕೇಂದ್ರಗಳಲ್ಲಿ ಮತಗಟ್ಟೆ ಸಿಬ್ಬಂದಿಗಳು ಹೊರಡಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಇವಿಎಂ, ವಿವಿ ಪ್ಯಾಟ್‍ಗಳು, ಕಂಟ್ರೋಲಿಂಗ್ ಯುನಿಟ್, ಶಾಯಿ, ಚುನಾವಣೆಗೆ ಅಗತ್ಯವಾದ ಇತರೆ ಸಾಮಗ್ರಿಗಳೊಂದಿಗೆ ಅಧಿಕಾರಿ, ಸಿಬ್ಬಂದಿಗಳು ಸಿದ್ದತೆ ಮಾಡಿಕೊಂಡು ನಿಯೋಜಿಸಲಾದ ಬಸ್‍ಗಳಲ್ಲಿ ಸಂಬಂಧಿಸಿದ ಮತಗಟ್ಟೆಗಳಿಗೆ ತೆರಳಿದರು.