ಚಿತ್ರನಟ ಯೇಸು ಪ್ರಕಾಶ್ ನಿಧನಚಿತ್ರರಂಗದಲ್ಲಿ ಪ್ರಕಾಶ್ ಹೆಗ್ಗೋಡು ಎಂದು ಗುರುತಿಸಲ್ಪಡುತ್ತಿದ್ದ ಯೇಸು ಪ್ರಕಾಶ್ ಕನ್ನಡದ ವೀರು ಚಿತ್ರದಲ್ಲಿ ಖಳನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ನಂತರ ಸಂತ, ಮಾದೇಶ, ಬೃಂದಾವನ, ಕಲ್ಪನಾ-೨, ರಾಜಾಹುಲಿ ಸೇರಿ ೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕ ನಟರಾದ ದರ್ಶನ್, ಪುನೀತ್ ರಾಜ್‌ಕುಮಾರ್, ಯಶ್, ಮೊದಲಾದವರೊಂದಿಗೆ ತೆರೆ ಹಂಚಿಕೊಂಡಿದ್ದಲ್ಲದೆ, ಅಶೋಕ ಕಶ್ಯಪ್ ನಿರ್ದೇಶನದ ಅಂಬುಟಿ-ಇಂಬುಟಿ ತಮಿಳು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು.