ದಾವಣಗೆರೆಯಲ್ಲಿ ಕೊಡ ಹಿಡಿದು ಬೀದಿಗಿಳಿಯೋ ಸ್ಥಿತಿ ಇಲ್ಲ: ಮೇಯರ್ನೀರಿನ ಸಮಸ್ಯೆ ಇಡೀ ರಾಜ್ಯದಲ್ಲೇ ಇದ್ದು, ದಾವಣಗೆರೆಯಲ್ಲಿ ಪಾಲಿಕೆ ವಿಪಕ್ಷ ಬಿಜೆಪಿಯವರು ಆರೋಪಿಸಿದಂತೆ ಕೊಡ ಹಿಡಿದು, ಬೀದಿಗೆ ಬರುವ ಪರಿಸ್ಥಿತಿಯಂತೂ ಇಲ್ಲ. ಸದ್ಯಕ್ಕೆ ಭದ್ರಾ ನಾಲೆಗೆ ಬಿಟ್ಟಿರುವ ನೀರನ್ನು ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆಗೆ ತುಂಬಿಸಿ, ನೀರು ಪೂರೈಸಲು ಪಾಲಿಕೆ ಬದ್ಧವಿದೆ ಎಂದು ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್ ದಾವಣಗೆರೆಯಲ್ಲಿ ಹೇಳಿದರು.