ವಾಸ್ತವಿಕ ನೆಲೆಯಿಂದ ದೂರ ಇರುವ ಬಜೆಟ್: ಸಂಸದ ರಾಘವೇಂದ್ರ ಟೀಕೆ ಸಿದ್ದರಾಮಯ್ಯನವರು ಮಂಡಿಸಿದ ಕೊರತೆ ಬಜೆಟ್ನಲ್ಲಿ ಕೇವಲ ಕಾರ್ಯಕ್ರಮ ಘೋಷಿಸಲಾಗಿದೆ. ಆದರೆ, ಇದನ್ನು ಹೇಗೆ ಜಾರಿ ಮಾಡಲಾಗುತ್ತದೆ ಎಂಬುದರ ಕುರಿತು ಸ್ಪಷ್ಟನೆ ಇಲ್ಲ. ಹೀಗಾಗಿ, ಹಣ ಹೇಗೆ ಹೊಂದಿಸುತ್ತಾರೆ ಎಂಬುದು ಗೊತ್ತಿಲ್ಲ. ಹೇಗೆ ಈಡೇರಿಸುತ್ತಾರೆ ಎಂಬ ಭರವಸೆಯೂ ಇಲ್ಲ. ಯಾವುದೇ ಸ್ಪಷ್ಟ ಮುನ್ನೋಟ ಇಲ್ಲದ, ವಾಸ್ತವಿಕ ನೆಲೆಯಿಂದ ತೀರಾ ದೂರ ಇರುವ ನಿರಾಶದಾಯಾಕ ಬಜೆಟ್ ಇದಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.