ಗೋಪಿ ವೃತ್ತವಲ್ಲ, ಇದು ಟಿ.ಶೀನಪ್ಪ ಶೆಟ್ಟಿ ವೃತ್ತ.. ಹಲವು ದಶಕಗಳ ಕಾಲದ ಹಿಂದೆ ಶಿವಮೊಗ್ಗ ನಗರದಲ್ಲಿ ಅಸ್ಥಿತ್ವ ಕಂಡು, ಈಗಾಗಲೇ ಜನಮಾನಸದಿಂದ ಮರೆಯಾಗಿರುವ, ನಗರದ ಪ್ರಥಮ, ಸುಂದರ ವೃತ್ತ ಎನಿಸಿದ್ದ ಟಿ.ಶೀನಪ್ಪ ಶೆಟ್ಟಿ ವೃತ್ತ ಹೆಸರನ್ನು ಪರಿಣಾಮಕಾರಿಯಾಗಿ ಬಳಕೆಗೆ ತರುವ ನಿಟ್ಟಿನಲ್ಲಿ ಇದೀಗ ಗಂಭೀರ ಚರ್ಚೆ ಆರಂಭಗೊಂಡಿದೆ. ಮೂಲ ಹೆಸರು ಮತ್ತು ಆಗಿನ ಕಾಲದ ಮಹನೀಯರ ಹೆಸರು ಬದಲಾಗಬಾರದು ಎಂಬ ಸದುದ್ದೇಶದಿಂದ ಸದ್ದಿಲ್ಲದೇ ಅಭಿಯಾನವೊಂದು ಆರಂಭಗೊಂಡಿದೆ.