ಇಂದಿನಿಂದ ಚರಕ ಉತ್ಸವಭೀಮನಕೋಣೆ ಕವಿಕಾವ್ಯ ಟ್ರಸ್ಟ್ ಮತ್ತು ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ಆಶ್ರಯದಲ್ಲಿ ಫೆ.೨೪ ಮತ್ತು ೨೫ರಂದು ಸಾಗರ ತಾಲೂಕಿನ ಹೊನ್ನೆಸರದ ಶ್ರಮಜೀವಿ ಆಶ್ರಮದಲ್ಲಿ ಚರಕ ಉತ್ಸವ ಹಮ್ಮಿಕೊಳ್ಳಲಾಗಿದೆ. ಫೆ.೨೪ರಂದು ಕೈಮಗ್ಗ ಜವಳಿ ಇಲಾಖೆ ಸಹಯೋಗದೊಂದಿಗೆ ಪವಿತ್ರ ವಸ್ತ್ರ ಯೋಜನೆ ಅಡಿಯಲ್ಲಿ ಕೊಡು-ಕೊಳ್ಳುವವರ ಸಮಾವೇಶ ಹಾಗೂ ಪವಿತ್ರ ವಸ್ತ್ರ ಕುರಿತು ವಿಚಾರ ಮಂಥನ ನಡೆಯಲಿದೆ. ದೇಶದ ಹೆಸರಾಂತ ವಿನ್ಯಾಸಕಾರರು, ಕೈ ಉತ್ಪನ್ನಗಳ ಉತ್ಪಾದಕರು, ವಿವಿಧ ಜಿಲ್ಲೆಯ ನೇಕಾರರು, ಸಾಹಿತಿಗಳು, ಬರಹಗಾರರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.