ಶಿಕ್ಷಕರು ಕರ್ತವ್ಯ ನಿರ್ಲಕ್ಷಿಸಿದರೆ ಅಮಾನತು ಖಚಿತ: ಜಿ.ಪರಮೇಶ್ವರ್ಪ್ರಸಕ್ತ ವರ್ಷದಲ್ಲಿ ಮಧುಗಿರಿ ಮತ್ತು ಕೊರಟಗೆರೆ ತಾಲೂಕಿನ ಶಾಲೆಗಳಲ್ಲಿ ಎಸ್ಎಸ್ಎಲ್ ಸಿ ಫಲಿತಾಂಶ ಕಳಪೆಯಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕುಸಿಯುತ್ತಿದೆ, ಇದಕ್ಕೆಲ್ಲಾ ಅಧಿಕಾರಿಗಳ ಬೇಜಾವಾಬ್ದಾರಿಯೇ ಕಾರಣ, ನಿಮ್ಮ ಮಕ್ಕಳನ್ನಾದರೆ ಸರಿಯಾಗಿ ವಿದ್ಯಾಬ್ಯಾಸ ಮಾಡಿಸುತ್ತೀರಾ, ಆದರೆ ನಿಮಗೆ ಸಂಬಳ ನೀಡಿ ಪೋಷಿಸುವ ಸರ್ಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಸಡ್ಡೆ ತೋರುತ್ತೀರಾ.