ವೀರಶೈವ ಲಿಂಗಾಯಿತರು ಒಗ್ಗಟ್ಟು ಪ್ರದರ್ಶಿಸಿಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾತಿಗಣತಿ ನಡೆಸಲು ನಿರ್ಧರಿಸಿದ್ದು, ಇದನ್ನು ವೀರಶೈವ, ಲಿಂಗಾಯಿತ ಸಮುದಾಯ ಬಹಳ ಗಂಭೀರವಾಗಿ ಪರಿಗಣಿಸಬೇಕು. ಜಾತಿ ಕಲಂಗಳಲ್ಲಿ ವೀರಶೈವ-ಲಿಂಗಾಯಿತ ಎಂದೇ ನಮೂದಿಸುವ ಮೂಲಕ ನಮ್ಮಲ್ಲಿ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜು ತಿಳಿಸಿದ್ದಾರೆ.