ಶಾಲೆಗಳ ಬಿಸಿಯೂಟಕ್ಕೆ ಸಿದ್ದಗಂಗಾ ಶ್ರೀಗಳ ದಾಸೋಹವೇ ಸ್ಪೂರ್ತಿ ಯಾವುದೇ ಒಂದು ದೇಶದ ಅಭಿವೃದ್ಧಿಯನ್ನು ಸಂಪತ್ತು ಹಾಗೂ ಆರ್ಥಿಕತೆಯಿಂದ ನೋಡಲು ಸಾಧ್ಯವಿಲ್ಲ. ಆ ದೇಶದಲ್ಲಿರುವ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯಗಳು, ಜನರ ಜೀವನದ ಗುಣಮಟ್ಟ ನೋಡಿ ಅದರ ಅಭಿವೃದ್ಧಿಯನ್ನು ಅಳೆಯಬೇಕಾಗಿದೆ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವಯೋಗಿ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.